Drive logo

ಡ್ರೈವ್‌ನ ಸಂಗ್ರಹಣೆ ವೈಶಿಷ್ಟ್ಯಗಳನ್ನು ಅನ್ವೇಷಿಸಿ

ನಿಮ್ಮ ವಿಷಯ, ನಿಮ್ಮ ಹಾದಿ - ಡ್ರೈವ್ ವೈಶಿಷ್ಟ್ಯಗಳು

 

ನಿಮ್ಮ ಸಂಗ್ರಹಣೆಯು ಡ್ರೈವ್, Gmail ಮತ್ತು Google ಫೋಟೋಗಳ ಜೊತೆಗೆ ಕಾರ್ಯನಿರ್ವಹಿಸುತ್ತದೆ, ಈ ಮೂಲಕ ನೀವು ಫೈಲ್‌ಗಳನ್ನು ಸಂಗ್ರಹಿಸಬಹುದು, ಇಮೇಲ್ ಲಗತ್ತುಗಳನ್ನು ಉಳಿಸಬಹುದು ಮತ್ತು ಫೋಟೋಗಳನ್ನು ಡ್ರೈವ್‌ಗೆ ನೇರವಾಗಿ ಬ್ಯಾಕಪ್ ಮಾಡಬಹುದು. ನಿಮಗೆ ಅಗತ್ಯವಿದ್ದಲ್ಲಿ ನೀವು ಹೀಗೆ ಸಹ ಮಾಡಬಹುದು ಹೆಚ್ಚು ಗಾತ್ರದ ಮೇಘ ಸಂಗ್ರಹಣೆ ಪ್ಲಾನ್‌ ಅನ್ನು ಖರೀದಿಸಬಹುದು.

15 GB ಯ ಉಚಿತ Google ಡ್ರೈವ್ ಸಂಗ್ರಹಣೆ ಲೋಗೊ

ಫೋಟೋಗಳು, ವೀಡಿಯೊಗಳು, ಪ್ರಸ್ತುತಿಗಳು, PDF ಗಳು - Microsoft Office ಫೈಲ್‌ಗಳು ಕೂಡಾ. ಫೈಲ್ ಯಾವುದೇ ಪ್ರಕಾರದ್ದಾಗಿದ್ದರೂ ಪರವಾಗಿಲ್ಲ, ಎಲ್ಲವನ್ನೂ ಡ್ರೈವ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಬಹುದು.

ಚಿತ್ರಗಳು, ಡಾಕ್ಯುಮೆಂಟ್‌ಗಳು ಮತ್ತು ಸಂಗೀತ ಸೇರಿದಂತೆ Google ಡ್ರೈವ್ ಫೈಲ್ ಪ್ರಕಾರ ಪಟ್ಟಿ

ಡ್ರೈವ್‌ನಲ್ಲಿನ ಫೈಲ್‌ಗಳನ್ನು ಹಂಚಬೇಕೆಂದು ನೀವು ತೀರ್ಮಾನಿಸುವವರೆಗೂ ಅವುಗಳು ಖಾಸಗಿಯಾಗಿರುತ್ತವೆ. ನೀವು ಆರಿಸುವ ಯಾವುದೇ ಫೈಲ್ ಅಥವಾ ಫೋಲ್ಡರ್ ವೀಕ್ಷಿಸಲು, ಕಾಮೆಂಟ್‌ ಮಾಡಲು ಮತ್ತು ಎಡಿಟ್ ಮಾಡಲು ಇತರರನ್ನು ನೀವು ತ್ವರಿತವಾಗಿ ಆಹ್ವಾನಿಸಬಹುದು. ಇದರ ಆನ್‌ಲೈನ್ ಸಹಯೋಗವು ಸುಲಭವಾಗಿಸಿದೆ.

Google ಡ್ರೈವ್ ಗೌಪ್ಯತೆ ಮತ್ತು ಹಂಚಿಕೊಳ್ಳುವಿಕೆ ಆಯ್ಕೆಗಳು

ನಿಮ್ಮ ಫೈಲ್ ಭದ್ರತೆಯು ಅವಶ್ಯಕವಾಗಿದೆ. ಆದ್ದರಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ಗೆ ಏನೇ ಆದರೂ ಡ್ರೈವ್‌‍ನಲ್ಲಿನ ಪ್ರತಿಯೊಂದು ಫೈಲ್ ಸುರಕ್ಷಿತವಾಗಿರುತ್ತದೆ. SSL ಬಳಸಿಕೊಂಡು ಡ್ರೈವ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಇದೇ ರೀತಿಯ ಭದ್ರತೆ ಪ್ರೊಟೋಕಾಲ್ ಅನ್ನು Gmail ಮತ್ತು ಇತರ Google ಸೇವೆಗಳಲ್ಲಿ ಬಳಸಲಾಗಿದೆ.

Google ಡ್ರೈವ್ ಭದ್ರತೆ ಲಾಕ್

Google ಜೊತೆ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ನಿರ್ಮಿಸಲಾಗಿದೆ

 
ಒಂದು ಕ್ಲಿಕ್‍‌ನೊಂದಿಗೆ Gmail ಫೋಟೋ ಲಗತ್ತನ್ನು ಡ್ರೈವ್‌ನಲ್ಲಿ ಉಳಿಸಲಾಗಿದೆ

Gmail ನಲ್ಲಿನ ಲಗತ್ತಿನ ಮೇಲೆ ಮೌಸ್‌ ಹರಿದಾಡಿಸಿ ಹಾಗೂ ಡ್ರೈವ್ ಲೋಗೊವನ್ನು ಹುಡುಕಿ. ಇಲ್ಲಿ, ಯಾವುದೇ ಲಗತ್ತುಗಳನ್ನು ಏಕೈಕ, ಸುರಕ್ಷಿತ ಸ್ಥಳದಲ್ಲಿ ವ್ಯವಸ್ಥಿತಗೊಳಿಸಲು ಮತ್ತು ಹಂಚಿಕೊಳ್ಳಲು ಅವುಗಳನ್ನು ನಿಮ್ಮ ಡ್ರೈವ್‌ನಲ್ಲಿ ನೀವು ಉಳಿಸಬಹುದು.

ಒಂದು ಕ್ಲಿಕ್‍‌ನೊಂದಿಗೆ Gmail ಫೋಟೋ ಲಗತ್ತನ್ನು ಡ್ರೈವ್‌ನಲ್ಲಿ ಉಳಿಸಲಾಗಿದೆ

ನಿಮ್ಮ ಚಿತ್ರಗಳಲ್ಲಿನ ವಸ್ತುಗಳನ್ನು ಮತ್ತು ಸ್ಕ್ಯಾನ್‌ ಮಾಡಲಾದ ಡಾಕ್ಯುಮೆಂಟ್‌ಗಳಲ್ಲಿನ ಪಠ್ಯವನ್ನು ಡ್ರೈವ್ ಗುರುತಿಸಬಲ್ಲದು. ಹೀಗಾಗಿ ನೀವು “ಐಫೆಲ್ ಟವರ್” ನಂಥ ಪದವನ್ನು ಹುಡುಕಬಹುದು ಮತ್ತು ಆ ಪದವನ್ನು ಹೊಂದಿರುವ ಪಠ್ಯ ಡಾಕ್ಯುಮೆಂಟ್‌ಗಳನ್ನು ಪಡೆದುಕೊಳ್ಳಬಹುದು ಅಲ್ಲದೆ ವಾಸ್ತವದ ಐಫೆಲ್ ಟವರ್‌ನ ಚಿತ್ರಗಳನ್ನೂ ಪಡೆದುಕೊಳ್ಳಬಹುದು.

Google ಡ್ರೈವ್‌ನಲ್ಲಿ ಸಂಗ್ರಹಿಸಲಾದ ಹಾಗೂ Google+ ನಲ್ಲಿ ಹಂಚಿಕೊಳ್ಳಲಾದ ಒರೆಗಾನ್ ಕರಾವಳಿಯ ಫೋಟೋ

ಡ್ರೈವ್‌ನಲ್ಲಿ ನಿಮ್ಮ ಫೋಟೋಗಳನ್ನು ಸಂಗ್ರಹಿಸಿ ಮತ್ತು Google Photos ಜೊತೆಗೆ ಅವುಗಳಿಗೆ ಜೀವ ತುಂಬಿರುವುದನ್ನು ವೀಕ್ಷಿಸಿ. ಶ್ರಮವಿಲ್ಲದೆ, ಅನಿಮೇಶನ್‌ಗಳು, ಚಲನಚಿತ್ರಗಳು ಮತ್ತು ಇನ್ನಷ್ಟು ಅಂಶಗಳ ಜೊತೆಗೆ ಪರಿಣತರಿಂದ ಎಡಿಟ್ ಮಾಡಲಾದ ನೋಟವನ್ನು ಪಡೆದುಕೊಳ್ಳಿ.

Chromebooks ನಲ್ಲಿ Google ಡ್ರೈವ್ ಡೇಟಾ

Chromebooks ನಲ್ಲಿ Google ಡ್ರೈವ್ ಅಂತರ್‌ನಿರ್ಮಿತವಾಗಿದೆ, ಇದರಿಂದ ನಿಮ್ಮ ಫೈಲ್‌ಗಳು ಮತ್ತು ಫೋಟೋಗಳು ಸ್ವಯಂಚಾಲಿತವಾಗಿ ಬ್ಯಾಕಪ್ ಆಗುತ್ತವೆ. ಬಹುತೇಕ ಹೊಸ Chromebooks ಜೊತೆಗೆ ಎರಡು ವರ್ಷಗಳವರೆಗೆ 100GB ಉಚಿತ ಸಂಗ್ರಹಣೆಯನ್ನು ನೀವು ಪಡೆದುಕೊಳ್ಳುತ್ತೀರಿ.

 

ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಇನ್ನಷ್ಟು ಚುರುಕಾಗಿ ಕೆಲಸ ಮಾಡಿ

 

ಇತರರೊಂದಿಗೆ ರಚಿಸಿ ಮತ್ತು ಸಹಯೋಗಿಸಿ. ಡಾಕ್ಯುಮೆಂಟ್‌ಗಳು ಮತ್ತು ಫೈಲ್‌ಗಳನ್ನು ಹಂಚಿಕೊಳ್ಳಿ, ಸ್ಪ್ರೆಡ್‌ಶೀಟ್‌ಗಳನ್ನು ರಚಿಸಿ ಮತ್ತು ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ನಮ್ಮ ಡಾಕ್ಸ್, ಶೀಟ್‌ಗಳು ಮತ್ತು ಸ್ಲೈಡ್‌ಗಳು ಅಪ್ಲಿಕೇಶನ್‌ಗಳ ಮೂಲಕ ಪ್ರಸ್ತುತಿಯನ್ನು ರಚಿಸಿ.

Google ಡಾಕ್ಸ್, ಶೀಟ್‌ಗಳು ಹಾಗೂ ಸ್ಲೈಡ್‌ಗಳು ಹಂಚಿಕೆಗೆ ಲಭ್ಯವಿವೆ

Google ಫಾರ್ಮ್‌ಗಳು ಸರಳವಾದ ಆನ್‌ಲೈನ್ ಫಾರ್ಮ್‌ ಸಹಾಯದಿಂದ ಸಮೀಕ್ಷೆ ನಡೆಸಲು ಅಥವಾ ತ್ವರಿತವಾಗಿ ತಂಡದ ಸರದಿಪಟ್ಟಿ ರಚಿಸಲು ನಿಮಗೆ ಅನುಮತಿಸುತ್ತದೆ. ನಂತರ ಸ್ಪ್ರೆಡ್‌ಶೀಟ್‌ನಲ್ಲಿ ಸುಂದರವಾಗಿ ಆಯೋಜಿಸಲಾಗಿರುವ, ಫಲಿತಾಂಶಗಳನ್ನು ಪರಿಶೀಲಿಸಿ.

ಉದಾಹರಣೆಗೆ Google ಡ್ರೈವ್‌ನಲ್ಲಿ Google ಫಾರ್ಮ್‌ಗಳು

ರೇಖಾಕೃತಿಗಳನ್ನು ವಿನ್ಯಾಸಗೊಳಿಸಿ, ಫ್ಲೋ ಚಾರ್ಟ್ ರಚಿಸಿ ಹಾಗೂ ಅವುಗಳನ್ನು ಇತರ ಡಾಕ್ಯುಮೆಂಟ್‌ಗಳಿಗೆ ಸುಲಭವಾಗಿ ಸೇರಿಸಿ ಅಥವಾ ವೆಬ್‌ಸೈಟ್‌ನಲ್ಲಿ ಅವುಗಳನ್ನು ಎಂಬೆಡ್ ಮಾಡಿ Google ಚಿತ್ರಕಲೆಗಳು.

Google ಚಿತ್ರಕಲೆಗಳ ಐಕಾನ್

ನಿಮ್ಮ ಪ್ರೊಫೈಲ್ ಪೋಟೋವನ್ನು ಎಡಿಟ್ ಮಾಡಿ, ಕೆಲವು ಲ್ಯಾಂಡ್‌ಸ್ಕೇಪ್ ಮಾಡಿ, ಮೈಂಡ್ ಮ್ಯಾಪ್ ಮತ್ತು ಇನ್ನಷ್ಟು ಕಾರ್ಯಗಳನ್ನು ಮಾಡಿ. ನಿಮ್ಮ ವಿಷಯಗಳೊಂದಿಗೆ ಇನ್ನಷ್ಟು ಕೆಲಸ ಮಾಡಲು ಸುಮಾರು 100 ಕ್ಕೂ ಹೆಚ್ಚಿನ ಡ್ರೈವ್ ಅಪ್ಲಿಕೇಶನ್‌ಗಳು ನಿಮಗೆ ಸಹಾಯ ಮಾಡುತ್ತವೆ. Chrome ವೆಬ್ ಸ್ಟೋರ್‌ನಲ್ಲಿನ ಡ್ರೈವ್ ಸಂಗ್ರಹದಿಂದ ಸ್ಥಾಪಿಸುವ ಮೂಲಕ ಅವುಗಳನ್ನು ಪ್ರಯತ್ನಿಸಿ.

ಸುಮಾರು 100 Google ಡ್ರೈವ್ ಅಪ್ಲಿಕೇಶನ್‌ಗಳು ಲಭ್ಯ

ಡ್ರೈವ್ ಅನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಿರಿ

 
Android ಫೋನ್‌ನಲ್ಲಿ ಫೋಟೋ ತೆಗೆದುಕೊಳ್ಳುವ ಮೂಲಕ ಡಾಕ್ಸ್ ಅನ್ನು ಡ್ರೈವ್‌ನಲ್ಲಿ ಉಳಿಸುವ ಉದಾಹರಣೆ

ನಿಮ್ಮ ಎಲ್ಲಾ ಪೇಪರ್ ಡಾಕ್ಯುಮೆಂಟ್‌ಗಳನ್ನು Android ಗಾಗಿ ಡ್ರೈವ್‌ ಸಹಾಯದಿಂದ ಸ್ಕ್ಯಾನ್ ಮಾಡಿ. ಸ್ವೀಕೃತಿಗಳು, ಪತ್ರಗಳು ಮತ್ತು ಲೆಕ್ಕಪಟ್ಟಿಗಳಂಥ ಡಾಕ್ಯುಮೆಂಟ್‌ಗಳ ಫೋಟೋ ತೆಗೆಯಿರಿ – ಮತ್ತು ಅವುಗಳನ್ನು ಡ್ರೈವ್ ತ್ವರಿತವಾಗಿ PDF ಗಳಾಗಿ ಸಂಗ್ರಹಿಸಿಡುತ್ತದೆ.

Google ಡ್ರೈವ್ ಆಫ್‌ಲೈನ್ ಅಥವಾ ಆನ್‌ಲೈನ್‌ಗೆ ಬದಲಾಯಿಸುವಿಕೆ

ನೀವು ಫೈಲ್‌ಗಳನ್ನು ಆಫ್‌ಲೈನ್‌ನಲ್ಲೂ ಲಭ್ಯವಾಗುವಂತೆ ಮಾಡಿಕೊಳ್ಳಿ, ಹೀಗಾಗಿ ವಿಮಾನ ಅಥವಾ ಕಟ್ಟಡದಂತಹ ಸ್ಥಳಗಳಲ್ಲಿ ಸಂಪರ್ಕದ ಕೊರತೆಯಿಂದಾಗಿ ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ ಸೇವೆಯನ್ನು ಕಳೆದುಕೊಂಡಾಗಲೂ ನೀವು ಅವುಗಳನ್ನು ವೀಕ್ಷಿಸಬಹುದು.

Google ಡ್ರೈವ್ ಫೈಲ್‌ ಪರಿಷ್ಕರಣೆ ಇತಿಹಾಸದ ಉದಾಹರಣೆ

ಬಹುತೇಕ ಫೈಲ್‌ಗಳ ಪ್ರಕಾರಗಳಲ್ಲಿ 30 ದಿನಗಳಷ್ಟು ಹಿಂದಿನ ಸ್ಥಿತಿಯನ್ನು ನೀವು ನೋಡಬಹುದು, ಇದರಿಂದಾಗಿ ಯಾರು ಬದಲಾವಣೆಗಳನ್ನು ಮಾಡಿದ್ದಾರೆ ಎಂಬುದನ್ನು ನೋಡಲು ಮತ್ತು ಹಿಂದಿನ ಆವೃತ್ತಿಗಳಿಗೆ ಹೋಗಲು ಸುಲಭವಾಗುತ್ತದೆ. ಅದು ಫೈಲ್ ಆವೃತ್ತಿ ಮಾಡುವಿಕೆಯನ್ನು ಸುಲಭಗೊಳಿಸಿದೆ.